
11th September 2024
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕ್ಲಸ್ಟರ್ ಮಟ್ಟದ "ಪ್ರತಿಭಾ ಕಾರಂಜಿ" ಕಾರ್ಯಕ್ರಮ
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ.
ವಿಜಯಪುರ(ದೇವನಹಳ್ಳಿ):ತಾಲೂಕು ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಶೈಕ್ಷಣಿಕ ಬಲವರ್ಧನೆ ವರ್ಷ 2024-25
ಉರ್ದು ಕ್ಲಸ್ಟರ್ ಮಟ್ಟದ "ಪ್ರತಿಭಾ ಕಾರಂಜಿ" ಕಾರ್ಯಕ್ರಮ ಗುರಪ್ಪನ ಮಠ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಪ್ರಬಂಧ ಬರವಣಿಗೆ,ಭಾಷಣ,ಚಿತ್ರ ಕಲೆ,ಅಲಂಕಾರಿಕ ಉಡುಗೆ,ಕಥೆ ಹೇಳುವುದು,ಮಿಮಿಕ್ರಿ ಸೇರಿದಂತೆ ಸುಮಾರು ವಿವಿಧ ಸ್ಪರ್ಧೆಗಳಲ್ಲಿ 9 ಶಾಲೆಯಿಂದ ಮಕ್ಕಳು ಭಾಗವಹಿಸಿದ್ದರು.
ಉರ್ದು ಇಸಿಒ ರಹತ್ ಉನಿಸ ಮಾತನಾಡಿ, ಪ್ರತಿಭಾ ಕಾರಂಜಿ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಸಿಗುತ್ತದೆ. ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸದೆ ಅವರಲ್ಲಿನ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ಪೋಷಕರು ನೀಡಬೇಕು ಎಂದರು.
ಇ ಸಿ ಓ ಕೋಮಲ ಮಾತನಾಡಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೆ ತಮ್ಮಲ್ಲಿರುವಂತಹ ಪ್ರತಿಭೆವನ್ನು ತೋರಿಸಲು ಅವಕಾಶ ಸಿಗುತ್ತದೆ ಎಂದು ಹೇಳಿದರು.
ಗುರಪ್ಪನ ಮಠ ಉರ್ದು ಪ್ರಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಮ್ ಸಿಯ, ಇ ಸಿ ಓ ಅನಂತ್, ನಾಗಪ್ಪ, ಸುಮಾ, ಬಿ ಆರ್ ಸಿ ಸಿ ಮಂಜುಳ, ಸಿ ಆರ್ ಪೀ ಕೃಷ್ಣ ರಾವ್ ಸೇರಿದಂತೆ ತಾಲೂಕಿನ ಎಲ್ಲಾ ಸಿ ಆರ್ ಪಿ ಸೇರಿದಂತೆ ಪೋಷಕರು ಇದ್ದರು.
*‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ನಾರಾ ಭರತ್ ರೆಡ್ಡಿ* *ಸಾಮಾನ್ಯ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಸಹಕಾರಿ*
ಕೆಎಂಎಫ್ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧ ಆಯ್ಕೆ